ಮುನ್ನುಡಿ

"ಸುಶಿಕ್ಷಿತ ಮಹಿಳೆ -ಸುಶಕ್ತ ಸಮಾಜ " ಆಧುನಿಕ ಸಮೂಹದಲ್ಲಿ ಎಲ್ಲರೂ ಅಂಗೀಕರಿಸುವ ಘೋಷ ವಾಕ್ಯ.ಈ ಆಪ್ತವಾಕ್ಯ ಸಾಕ್ಷಾತ್ಕಾರವಾಗಬೇಕಾದರೆ ಸಾಮಾನ್ಯ ಶಿಕ್ಷಣದ ಜತೆಗೆ ನೈತಿಕ ಶಿಕ್ಷಣವನ್ನೂ ಮಹಿಳೆಗೆ ನೀಡಬೇಕು. ಕುಟುಂಬ ಪಾಲನೆ ಮತ್ತು ಧಾರ್ಮಿಕ ಚೌಕಟ್ಟಿನಲ್ಲಿ ಮಕ್ಕಳ ಪೋಷಣೆ ಎಂಬ ಗುರುತರ ಜವಾಬ್ಧಾರಿಯನ್ನು ಆಕೆ ಪರಿಣಾಮಕಾರಿಯಾಗಿ ನಿಭಾಯಿಸಲು ವ್ಯವಸ್ಥಿತ ತರಬೇತು ಮತ್ತು ಧಾರ್ಮಿಕ ವಿಧ್ಯಾಭ್ಯಾಸ ಅತ್ಯಗತ್ಯ. ಈ ಮಹತ್ತರ ಉದ್ದೇಶವನ್ನು ಮುಂದಿಟ್ಟು 2003 ರಲ್ಲಿ ಸ್ಥಾಪಿದವಾದ ಸಂಸ್ಥೆಯಾಗಿದೆ ಮರ್ಕಝ್ ಅಲ್ ಹುದಾ.
ಮುಸ್ಲಿಂ ಮುಂದಾಳುವೂ ಸಾತ್ವಿಕರೂ ಆಗಿದ್ದ ಮರ್ಹೂಂ ಕುಂಬ್ರ ಶೇಖಮಲೆ ಮಮ್ಮುಂಜಿ ಹಾಜಿಯವರು ದಾನ ನೀಡಿದ ಜಾಗದಲ್ಲಿ ಅ ಪ್ರದೇಶದ ಉನ್ನತ ಉಲಮಾ -ಉಮಾರಗಳ ನೇತ್ರತ್ವದಲ್ಲಿ ಸಂಸ್ಥೆ ಮುನ್ನಡೆಯುತ್ತಿದೆ.
ಉತ್ತಮ ಗೃಹಿಣಿ ಮೂಲಕ ಸುಶಿಕ್ಷಿತ ಕುಟುಂಬ, ಸುಭದ್ರ ಸಮಾಜ ಎಂಬ ಧ್ಯೇಯದಡಿ ಕಳೆದ 9 ವರ್ಷಗಳಲ್ಲಿ ಸಾವಿರಕ್ಕೂ ಮಿಕ್ಕ ಹೆಣ್ಣು ಮಕ್ಕಳು ಈ ಸಂಸ್ಥೆಯ ಪ್ರಯೋಜನ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನಷ್ಟು ವಿನೂತನ ಯೋಜನೆಗಳು ಸಂಸ್ಥೆಗಿದೆ.ಸಹೃದಯಿ ಶಿಕ್ಷಣ ಪ್ರೇಮಿಗಳ ಪ್ರಾರ್ಥನೆ, ಬೆಂಬಲ, ಸಹಾಯ ಸಹಕಾರಗಳನ್ನು ನಿರೀಕ್ಷಿಸುತ್ತೇವೆ.
MSM.Abdul Rasheed Saquafi Zaini Kamil M.A.
(GENERAL SECRETARY)
Tel :+91 9480173808 / 9742625639
E-mail : zainikamil@gmail.com